ಧರ್ಮಸ್ಥಳ: ಧರ್ಮಸ್ಥಳ ದಲ್ಲಿ ಹೂತು ಹಾಕಲಾಗಿದೆ ಎನ್ನಲಾಗಿರುವ ಮೃತದೇಹಗಳ ತನಿಖೆಗೆ ರಚಿಸಲ್ಪಟ್ಟಿರುವ ಎಸ್‌ಐಟಿ ಸತತ ನಾಲ್ಕನೇ ದಿನವೂ ಶೋಧ ಮುಂದುವರಿಸಿದ್ದು, ಇಂದು 6ನೇ ಗುರುತಿನಲ್ಲಿ ಮೃತದೇಹ ಅವಶೇಷ ಪತ್ತೆಯಾಗಿದೆ. ಇದೀಗ ಅದನ್ನು ಪುರುಷನ ಕಳೇಬರ ಎನ್ನಲಾಗುತ್ತಿದೆ.
ಸುಜಾತ ಭಟ್ ವಕೀಲರಾದ ಎನ್. ಮಂಜುನಾಥ್ ' ಸತ್ಯಕ್ಕೇ ಜಯ!
ಸತ್ಯ ಮೇವ ಜಯತೆ! God is great ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಇದು ಮೃತದೇಹ ಅವಶೇಷ ಸಿಕ್ಕಿರುವ ಮೂಲಗಳ ಮಾಹಿತಿಯನ್ನು ಪುಷ್ಟೀಕರಿಸುತ್ತದೆ.
ಅನಾಮಿಕ ದೂರುದಾರ ಒಟ್ಟು 13 ಸ್ಥಳಗಳನ್ನು ಗುರುತಿಸಿದ್ದು, ಇನ್ನೂ 6 ಸ್ಥಳಗಳ ಶೋಧ ಬಾಕಿ ಇದೆ.