ಆಳ್ವಾಸ್ ಶಿಕ್ಷಣ ಪತಿಷ್ಠಾನದ ವತಿಯಿಂದ ಆಯೋಜನೆಗೊಳ್ಳುತ್ತಿರುವ ಬೃಹತ್ ಉದ್ಯೋಗ ಮೇಳ ಆಳ್ವಾಸ್ ಪ್ರಗತಿ ಆಗಷ್ಟ್01 ಹಾಗೂ 02 ರಂದು ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ.
ಆಳ್ವಾಸ್ ಪ್ರಗತಿ-2025ರಲ್ಲಿ ವಿವಿಧ ಕಂಪೆನಿಗಳು ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾಮೆಡಿಕಲ್, ಇಂಜಿನಿಯರಿಂಗ್, ಕಲಾ, ವಾಣಿಜ್ಯ ಹಾಗೂ ಮ್ಯಾನೇಜ್‍ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ ಎಸ್‍ಎಸ್‍ಎಲ್‍ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ.
ಯಾವುದೇ ಕೋರ್ಸಗಳನ್ನು 2025ರ ಶೈಕ್ಷಣಿಕ ವರ್ಷದ ಮುಂಚೆ ಅಥವಾ ಒಳಗೆ ಪೂರ್ಣಗೊಳಿಸುವವರು ಹಾಗೂ ಅನುಭವವಿರುವ ಅಭ್ಯರ್ಥಿಗಳು ಈ ಮೇಳದಲ್ಲಿ ಮುಕ್ತವಾಗಿ ಭಾಗವಹಿಸಬಹುದು.
ಅವಕಾಶಗಳ ಮಹಾಪೂರ
15ನೇ ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ ಉದ್ಯೋಗಾವಕಾಶದ ಮಹಾಪೂರವೇ ಲಭಿಸಲಿದ್ದು, ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ-3012, ಐಟಿಐ ಹಾಗೂ ಡಿಪ್ಲೋಮಾ- 4350, ಯಾವುದೇ ಪದವಿ- 3847, ಬಿಇ/ಬಿಟೆಕ್- 805, ಕೋರ್ ಐಟಿ- 119, ಮೆಡಿಕಲ್ ಹಾಗೂ ಪ್ಯಾರಾ ಮೆಡಿಕಲ್- 709, ಯಾವುದೇ ಸ್ನಾತಕೋತ್ತರ/ಎಂಬಿಎ- 1446, ಬಿಕಾಂ ಹಾಗೂ ಬಿಬಿಎ- 1176, ಗಲ್ಫ್ ರಾಷ್ಟ್ರ-316 ಉದ್ಯೋಗದ ಅವಕಾಶಗಳು ಇರಲಿದೆ.
ಆಳ್ವಾಸ್ ಪ್ರಗತಿ -2025ರ ವಿಶೇಷತೆಗಳು:
ಈ ಬಾರಿಯ ಆಳ್ವಾಸ್ ಪ್ರಗತಿಯಲ್ಲಿ ಈಗಾಗಲೇ 302 ಕಂಪೆನಿಗಳ ನೋಂದಾವಣೆಯನ್ನು ಖಾತ್ರಿಪಡಿಸಲಾಗಿದೆ.
ANZ, Allcargo logistics , Oracle, Fortune Group of Hotels Dubai, Expertise , Wockhardt Hospital, Infosys BPM, Sakra World Hospital , Zee media, Decathlon, Toyota Kirloskar Motors, Exicom Tele Systems, Bulher India Pvt. Ltd, Volvo Group, Jubilant Pharmova, Flipkart, Amazon ಮುಂತಾದ ಪ್ರಮುಖ ಕಂಪೆನಿಗಳು ಭಾಗವಹಿಸಲಿವೆ.
ಒಟ್ಟು 16027+ ಉದ್ಯೋಗ ಅವಕಾಶಗಳು ಇರಲಿವೆ
13 ವಲಯಗಳು ಭಾಗವಹಿಸಲಿವೆ- ಮ್ಯಾನುಫ್ಯಾಕ್ಚರಿಂಗ್ ವಲಯ, ಲಾಜಿಸ್ಟಿಕ್ಸ್ ವಲಯ, ಐಟಿ ವಲಯ, ಐಟಿಇಎಸ್ ವಲಯ, ಬ್ಯಾಂಕಿಂಗ್ ಮತ್ತು ಹಣಕಾಸು ವಲಯ, ಹೆಲ್ತ್‍ಕೇರ್ ವಲಯ, ಫಾರ್ಮಾವಲಯ, ಮಾಧ್ಯಮ ವಲಯ, ಮಾರಾಟ ಮತ್ತು ಚಿಲ್ಲರೆ ವಲಯ, ಕನ್ಸ್ಟ್ರಕ್ಷನ್ ವಲಯ, ಹಾಸ್ಪಿಟಾಲಿಟಿ ವಲಯ, ಶಿಕ್ಷಣ ಹಾಗೂ ಎನ್‍ಜಿಒ, ಟೆಲಿಕಮ್ಯೂನಿಕೇಷನ್ ವಲಯ ವಿದ್ಯಾರ್ಥಿಗಳ ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಕಲರ್‍ಕೋಡಿಂಗ್ ಬ್ಯಾಡ್ಜ್‍ನ್ನು ನೀಡಲಾಗುತ್ತದೆ. ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ-ಕೆಂಪು, ನರ್ಸಿಂಗ್, ಪ್ಯಾರಾ ಮೆಡಿಕಲ್ ಹಾಗೂ ಮೆಡಿಕಲ್-ಬಿಳಿ, ಸ್ನಾತಕೋತ್ತರ ಪದವಿ- ಹಳದಿ, ಇಂಜಿನಿಯರಿಂಗ್-ಬೂದು ಬಣ್ಣ, ಯಾವುದೇ ಪದವಿ- ಹಸಿರು ಬಣ್ಣ, ಐಟಿಐ- ಕೇಸರಿ ಬಣ್ಣ, ಡಿಪ್ಲೋಮಾ- ಪಿಂಕ್
ವಿಶೇಷ ಸೂಚನೆ
ಆಳ್ವಾಸ್ ಪ್ರಗತಿ 2025ರ ನೋಂದಣಿ ಮತ್ತು ಪಾಲ್ಗೊಳ್ಳುವ ಕಂಪೆನಿಗಳ ಮಾಹಿತಿ ಹಾಗೂ ವಿವರಕ್ಕಾಗಿ ಭೇಟಿ ನೀಡಿ: www.alvaspragati.com
ಹೊರ ರಾಜ್ಯದ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುವ ಆಕಾಂಕ್ಷಿಗಳಿಗೆ ಜುಲೈ 31ರಿಂದ ಉಚಿತ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗುವುದು.ಐಟಿಐ/ ಡಿಪ್ಲೋಮಾ ಅಭ್ಯರ್ಥಿಗಳಿಗೆ ಉಚಿತ ಬಸ್‍ನ ವ್ಯವಸ್ಥೆ ಮಾಡಲಾಗಿದೆ
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9741440490 / 7975223865/ 9611750531
ಸೂಚನೆ: ಐಟಿಐ, ಪಿಯುಸಿ ಮತ್ತು ಎಸ್‍ಎಸ್‍ಎಲ್‍ಸಿ ಮತ್ತು ಅದಕ್ಕಿಂತ ಕಡಿಮೆ ವಿದ್ಯಾರ್ಹತೆಯ ಅಭ್ಯರ್ಥಿಗಳನ್ನು ಹೊರತು ಪಡಿಸಿ, ಎಲ್ಲರಿಗೂ ನೋಂದಣಿ ಕಡ್ಡಾಯವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಸಾದ್ ಶೆಟ್ಟಿ, ಮುಖ್ಯಸ್ಥರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಆಳ್ವಾಸ್ ಕಾಲೇಜು ರಂಜಿತಾ ಆಚಾರ್ಯ, ಮುಖ್ಯಸ್ಥರು- ತರಬೇತಿ ಮತ್ತು ನಿಯೋಜನೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ ಉಪಸ್ಥಿತರಿದ್ದರು.