"ಪರ್ಯಾಯ ರಾಜಕೀಯ ಚಳುವಳಿಯ ಅಗತ್ಯತೆ ಮತ್ತು ಸವಾಲುಗಳು" – ಎಸ್ ಡಿ ಪಿ ಐ ವತಿಯಿಂದ ಉಡುಪಿಯಲ್ಲಿ ಸಂವಾದ ಕಾರ್ಯಕ್ರಮ

ಕೋಸ್ಟಲ್‌ ಮಿರರ್
0





ಉಡುಪಿ :ಜುಲೈ 28: ಉಡುಪಿ ಎಸ್‌ಡಿಪಿಐ ಜಿಲ್ಲಾ ಕಚೇರಿಯಲ್ಲಿ "ಪ್ರಸಕ್ತ ಕಾಲಘಟ್ಟದಲ್ಲಿ ಪರ್ಯಾಯ ರಾಜಕೀಯ ಚಳುವಳಿಯ ಅಗತ್ಯತೆ ಮತ್ತು ಸವಾಲುಗಳು" ಎಂಬ ವಿಷಯದ ಬಗ್ಗೆ ಸಭೆ ಹಾಗೂ ಸಂವಾದವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ಹಿನ್ನೆಲೆಯ ಯುವ ನಾಯಕರು, ಪ್ರಭಾವಿ ಮುಖಂಡರು ಮತ್ತು ಪಕ್ಷದ ಹಿತೈಷಿಗಳು ಪಾಲ್ಗೊಂಡಿದ್ದರು.

ವಿಷಯದ ಕುರಿತು ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಯವರು ಮಾತನಾಡಿ   "ಪರ್ಯಾಯ ರಾಜಕೀಯ ಒಂದು ಆಯ್ಕೆಯಲ್ಲ; ಅದು ಜನತೆಯ ನೈಜ ಸಮಸ್ಯೆಗಳಿಗೆ ಸ್ಪಂದಿಸುವ ದೃಷ್ಟಿಕೋನ, ನೈತಿಕತೆಯ ಆಧಾರದ ಮೇಲೆ ದೇಶಕ್ಕೆ ಹೊಸ ದಿಕ್ಕು ತೋರಿಸುವ ಹೋರಾಟವಾಗಿದೆ." ಎಂದರು.

ದೇಶದಲ್ಲಿ ತಾಂಡವವಾಡುತ್ತಿರುವ  ಧರ್ಮಾಧಾರಿತ ಮತ್ತು ಮತಬ್ಯಾಂಕ್ ರಾಜಕೀಯದ ಪರಿಣಾಮಗಳು, ರಾಜಕೀಯ ವ್ಯವಸ್ಥೆಯ ಮೇಲೆ ಬಂಡವಾಳಶಾಹಿಗಳ ಹಿಡಿತ ಹಾಗೂ ಕುಟುಂಬ ರಾಜಕೀಯದಿಂದ ಜನ ಸಾಮಾನ್ಯರ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ಅವರು ಬೆಳಕು ಚೆಲ್ಲಿದರು. 

ಈ ಸಂವಾದದ ವೇದಿಕೆಯಲ್ಲಿ ಎಸ್‌ಡಿಪಿಐ ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಹನೀಫ್ ಮೂಳೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಶುದ್ದೀನ್ ಹಾಗೂ ಉಡುಪಿ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ರಹೀಂ ಆದಿಉಡುಪಿ ಉಪಸ್ಥಿತರಿದ್ದರು;

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!