ಉಜಿರೆ: ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಎಸ್‌ಐಟಿ ದಾಳಿ

ಕೋಸ್ಟಲ್‌ ಮಿರರ್
0


ಬೆಳ್ತಂಗಡಿ: ಸೌಜನ್ಯ ಕೊಲೆ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಇಂದು ಬೆಳಗ್ಗೆ ವಿಶೇಷ ತನಿಖಾ ತಂಡ (SIT) ಅಧಿಕಾರಿಗಳು ಭೇಟಿ ನೀಡಿ ಶೋಧ ನಡೆಸಿದ್ದಾರೆ. 

 ವಿಶೇಷ ತನಿಖಾ ತಂಡವು ಉಜಿರೆಯಲ್ಲಿರುವ ತಿಮರೋಡಿ ನಿವಾಸಕ್ಕೆ ತೆರಳಿ, ಶೋಧ ಕಾರ್ಯ ನಡೆಸಿದ್ದು, ಪ್ರಮುಖ ಆರೋಪಿ ಎಂದು ಹೇಳಲಾದ ಚಿನ್ನಯ್ಯ ಗೌಡ ಎಂಬುವವರನ್ನೂ ಕರೆತಂದು ವಿಚಾರಣೆ ನಡೆಸಿದೆ ಎಂದು ತಿಳಿದುಬಂದಿದೆ.

ಚಿನ್ನಯ್ಯ ವಿಚಾರಣೆ ವೇಳೆ ಮಹೇಶ್ ತಿಮರೋಡಿ ಮನೆಯಲ್ಲಿ ಆಶ್ರಯ ನೀಡಲಾಗಿತ್ತು ಎಂದು ಹೇಳಿದ್ದ. ಆರೋಪಿ ಚಿನ್ನಯ್ಯ ಆಶ್ರಯ ನೀಡಿದ್ದ ಹಿನ್ನಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಸರ್ಚ್ ವಾರೆಂಟ್ ಪಡೆದು ತಿಮರೋಡಿ ಮನೆ ಪ್ರವೇಶಿಸಿದ್ದಾರೆಎನ್ನಲಾಗುತ್ತಿದೆ.
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!