ಕಾರ್ಕಳ: ಇಲ್ಲಿನ ಕುಂಟಲಪಾಡಿ ರಸ್ತೆಯ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಾಗಿದ್ದ ಮಂಗಳೂರು ಮೂಲದ ನವೀನ್ ಪೂಜಾರಿ (50) ಎಂಬವರನ್ನು ಇರಿದು ಕೊ*ಲೆ ಮಾಡಲಾಗಿದೆ.
ಮಂಗಳವಾರ (ಆ.26) ಘಟನೆ ಬೆಳಕಿಗೆ ಬಂದಿದ್ದು, ಕಾರ್ಕಳ ನಗರ ಠಾಣೆ ಪೊಲೀಸರು ದೌಡಾಯಿಸಿದ್ದಾರೆ.
ಮೂಲಗಳ ಪ್ರಕಾರ, ನವೀನ್ ಪೂಜಾರಿ ಕಾರ್ಕಳದಲ್ಲಿ ನೆಲೆಸಿ ಹಣಕಾಸು ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಕೊ*ಲೆಯ ನಿಖರ ಕಾರಣ ಮತ್ತು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ.