ಕಾಪು: ಮೂಳೂರು ಸಮೀಪ ಕಾರು ಪಾಲ್ಟಿ: ಓರ್ವ ಮೃತ್ಯು, ಮೂವರಿಗೆ ತೀವ್ರ ಗಾಯ

ಕೋಸ್ಟಲ್‌ ಮಿರರ್
0

 


ಕಾಪು: ಕಾರೊಂದು ಪಲ್ಟಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಮೂವರು ತೀವ್ರವಾಗಿ ಗಾಯಗೊಂಡ ಘಟನೆ ಮೂಳೂರು ಸಮೀಪದ ಹಳ್ಳಿ ಮನೆ ಹೋಟೆಲ್ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ನಸುಕಿನ ವೇಳೆ 3 ಗಂಟೆ ಸುಮಾರಿಗೆ ನಡೆದಿದೆ.

ಮೃತರನ್ನು ಬೆಳ್ಮಣ್ ನ ಮಾರ್ವಿನ್ ಮೆಂಡೊನ್ಸಾ ಎಂದು ಗುರುತಿಸಲಾಗಿದೆ
ಗಾಯಾಳುಗಳಾದ ಕಾರು ಚಾಲಕ ಅಂಬಲಪಾಡಿಯ ಪ್ರಜ್ವಲ್, ಕಾರ್ಕಳದ ಪ್ರಸಾದ್ ಮತ್ತು ವಿಘ್ನೇಶ್ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ



ಇವರು ಕಾರಿನಲ್ಲಿ ಅಂಬಲಪಾಡಿಯಿಂದ ಬೆಳ್ಮಣ್ ಗೆ ಹೋಗುತ್ತಿದ್ದಾಗ ನಾಯಿಯೊಂದು ಕಾರಿಗೆ ಅಡ್ಡ ಬಂತನ್ನೆಲಾಗಿದೆ.

ಇದರ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಪಾರ್ಟಿ ಆಯ್ತು ಎಂದು ತಿಳಿದು ಬಂದಿದೆ ಅಪಘಾತದಿಂದ ಕಾರು ಸಂಪೂರ್ಣ ಜಖಂಗೊಂಡಿದೆ



ತಕ್ಷಣ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಚ್ಚಿಲ ಹಾಗೂ ಮೂಳೂರಿನ ಎಸ್‌ಡಿಪಿಐ ಆಂಬುಲೆನ್ಸ್ ಗಳು ಗಾಯಾಳುಗಳನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸಿ ದಾಖಲಿಸಿದೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡ ಮಾರ್ವೀನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ

ಆಂಬುಲೆನ್ಸ್ ಚಾಲಕರಾದ ಕೆ.ಎಂ.ಸಿರಾಜ್, ಹಮೀದ್ ಹಾಗೂ ಸಾಮಾಜಿಕ ಕಾರ್ಯಕರ್ತ ಜಮಾಲುದ್ದೀನ್ ಉಚ್ಚಿಲ ಸಹಕರಿಸಿದ್ದಾರೆ. ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!