ಉಡುಪಿ: ವಕ್ಫ್ ಬೋರ್ಡ್ ಚೆಯರ್'ಮ್ಯಾನ್ ಯಾರು? - ವಿನಯ ಕುಮಾರ್ ಸೊರಕೆ ಹೇಳಿದ್ದೇನು?

ಕೋಸ್ಟಲ್‌ ಮಿರರ್
0

                                                                              

ಉಡುಪಿ: ಇದೀಗ ಉಡುಪಿ ಜಿಲ್ಲಾ ವಕ್ಫ್ ಬೋರ್ಡಿನ ಚೆಯರ್’ಮೆನ್ ಹುದ್ದೆಯ ಆಯ್ಕೆಗಾಗಿ ಪೈಪೋಟಿ ಜೋರಾಗಿ ನಡೆಯುತ್ತಿದ್ದು ಕಾಂಗ್ರೆಸ್ ನ ಹಲವು ಮುಸ್ಲಿಂ ನಾಯಕರು ರೇಸಿನಲ್ಲಿದ್ದಾರೆ. ಇದಕ್ಕಾಗಿ ಹಲವರು ಕಸರತ್ತುಗಳು ಕೂಡ ನಡೆಯುತ್ತಿದೆ.

ಈ ಮಧ್ಯೆ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಜಿಲ್ಲಾ ಉಸ್ತುವಾರಿ ಸಚಿವರ ಅನುಮೋದನೆಯೊಂದಿಗೆ ಜಿಲ್ಲಾ ನಾಯಕರು ಕುಳಿತು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಲಾಗುವುದೆಂದು ತಿಳಿಸಿದ್ದಾರೆ. ಈಗಾಗಲೇ ಈ ಕುರಿತು ಝಮೀರ್ ಅಹ್ಮದ್ ಖಾನ್ ಅವರಲ್ಲೂ ಚರ್ಚಿಸಿದ್ದೇನೆ. ಕಾಂಗ್ರೆಸ್ ಶಾಸಕ ಅಭ್ಯರ್ಥಿಗಳು, ಜಿಲ್ಲಾ ಕಾಂಗ್ರೆಸ್ ಮುಖಂಡರೊಂದಿಗೆ ಸೇರಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ.ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಹೊರತು ಪಡಿಸಿ ಬೇರೆಯವರಿಗೆ ನೀಡುವ ಕುರಿತು ಯಾವುದೇ ಪ್ರಸ್ತಾವನೆಯಿಲ್ಲ ಎಂದು ಸ್ಪಷ್ಟಪಡಿಸಿದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!