ಇದೇ ವಿಚಾರವಾಗಿ ಮಾತನಾಡಿದ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು, ಬಿಎಲ್ ಸಂತೋಷ್ ವಿರುದ್ಧ ಮಾತನಾಡಲು ಆತನ ಬಳಿ ಯಾವ ದಾಖಲೆ ಇದೆ. ವಿನಃ ಕಾರಣ ಅವಹೇಳನ ಮಾಡಿದ್ದ ತಿಮರೋಡಿಯನ್ನು ಒದ್ದು ಒಳಗೆ ಹಾಕಿದ್ದೇವೆ ಎಂದು ಡಿಸಿಎಂ ಹೇಳಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬಿ.ಎಲ್.ಸಂತೋಷ್ ಬಗ್ಗೆ ಮಹೇಶ್ ತಿಮರೋಡಿ ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಆರೋಪಗಳನ್ನು ಮಾಡಲು ಆತನ ಬಳಿ ದಾಖಲೆ ಏನಿದೆ?. ಹೀಗಾಗಿ ಅವನನ್ನು ಒದ್ದು ಒಳಗೆ ಹಾಕಿದ್ದೇವೆ ಎಂದರು. ರಾಜಕೀಯವಾಗಿ ನಮ್ಮ ನಡುವೆ ಸಾಕಷ್ಟು ಭಿನ್ನಾಭಿಪ್ರಾಯವಿರಬಹುದು. ಆದರೆ ನಮ್ಮ ವಿರೋಧಿಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರೆ ಅದನ್ನು ಕೇಳಿಕೊಂಡು ನಾವು ಖುಷಿಪಡುವುದಿಲ್ಲ.
ಯಾರು ಬೇಕಾದರೂ ರಾಜಕೀಯವಾಗಿ ಆರೋಪ ಮಾಡಬಹುದು ತಪ್ಪೇನಿಲ್ಲ. ಆದರೆ ಯಾರೇ ಆರೋಪ ಮಾಡುವಾಗಲೂ ದಾಖಲೆಗಳನ್ನು ಇಟ್ಟುಕೊಂಡು ಆರೋಪ ಮಾಡಲಿ. ಅದನ್ನು ಬಿಟ್ಟು ಸ್ವಾಭಿಮಾನಕ್ಕೆ ಧಕ್ಕೆ ತರುವಂತ ಮಾತುಗಳನ್ನು ಆಡಬಾರದು. ಈ ರಾಜ್ಯದಲ್ಲಿ ಯಾರ ಸ್ವಾಭಿಮಾನಕ್ಕೂ ಯಾರೂ ಧಕ್ಕೆ ತರುವಂತ ಕೆಲಸ ಮಾಡಬಾರದು ಎಂದು ಡಿಕೆ ಶಿವಕುಮಾರ್ ಹೇಳಿದರು.