ಆರ್ ಎಸ್ ಎಸ್ ನ ಪ್ರಾರ್ಥನೆಯನ್ನು ವಿಧಾನ ಮಂಡಲದ ಅಧಿವೇಶನದಲ್ಲಿ ಪಠಿಸುವ ಮೂಲಕ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಪವಿತ್ರ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ ಇದನ್ನು ಉಗ್ರವಾಗಿ ಖಂಡಿಸುತ್ತೇನೆ. ಸಂವಿಧಾನದ ಜಾತ್ಯಾತೀತ ಚೌಕಟ್ಟಿನ ಅಡಿಯಲ್ಲಿ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ ಡಿ. ಕೆ. ಶಿವಕುಮಾರ್ ಸಂವಿಧಾನದ ಮೂಲ ಆಶಯಕ್ಕೇ ಮಸಿ ಬಳಿದಿದ್ದಾರೆ. ಇದು ಅಕ್ಷಮ್ಯ.
ಸನಾತನ ಧರ್ಮ, ಜಾತೀವಾದ, ಏಕ ಧರ್ಮವನ್ನು ಪೋಷಿಸುವ ಆರ್. ಎಸ್. ಎಸ್. ನ ಪ್ರಾರ್ಥನೆಯನ್ನು ಬಹಿರಂಗವಾಗಿ ವಿಧಾನಸಭೆಯಲ್ಲೇ ಪ್ರಾರ್ಥಿಸುವ ಮೂಲಕ ತಮ್ಮ ನಿಜ ಹಿಂದುತ್ವವನ್ನು ಘೋಷಣೆ ಮಾಡಿ ಸಂವಿಧಾನದ ಜಾತ್ಯತೀತತೆಗೆ ಕೊಡಲಿ ಏಟು ಕೊಟ್ಟಿದ್ದಾರೆ. ಸಂವಿಧಾನ ವಿರೋಧಿ ಯಾದ, ರಾಷ್ಟ್ರ ಧ್ವಜ ವಿರೋಧಿ ಯಾದ, ಮತ್ತು ಶ್ರೇಣಿಕ್ರತ ಜಾತೀವಾದಿ ಹಿಂದು ಧರ್ಮವನ್ನು ಪ್ರತಿಪಾದಿಸುವ ಆರ್. ಎಸ್. ಎಸ್. ನ್ನು ಹಿಂಬಾಗಿನಿಂದ ಪ್ರತಿಪಾಧಿಸುವ ಪ್ರಯತ್ನ ಮಾಡಿ ಈ ನಾಡಿನ ಅಸ್ಪಶ್ರ್ಯತೆಗೆ ಬೆಂಬಲಿಸುವ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲಾ ಈ ನಾಡಿನ ಶೋಷಿತ ಸಮೂದಾಯದ ಬಗ್ಗೆ ತಮಗಿರುವ ಅಸಹನೆ, ತಾತ್ಸಾರ, ನಿಕ್ರಷ್ಟ ಭಾವನೆಯ ಅನಾವರಣ ಮಾಡಿದ್ದಾರೆ.
ಬಾಬಾಸಾಹೇಬರ ಸಂವಿಧಾನ ಜಾರಿಗೆ ಬರಬಾರದು ಎಂದು ಪ್ರತಿಭಟನೆ ನಡೆಸಿದ, ಕಾಲು ಶತಮಾನಗಳ ವರೆಗೂ ತಮ್ಮ ಆರ್. ಎಸ್. ಎಸ್. ನ ಕೇಂದ್ರ ಕಛೇರಿ ನಾಗ್ಪುರದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸದ, ಮತ್ತು ಇಂಡಿಯಾವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿರುವ ಆರ್. ಎಸ್. ಎಸ್. ನ ಪ್ರಾರ್ಥನೆಯನ್ನು ವಿಧಾನ ಮಂಡಲದ ಅಧೀವೇಶನದಲ್ಲಿ ಪ್ರಾರ್ಥಿಸುವ ಮೂಲಕ ತಾನೂ ಒಬ್ಬ ಹಿಂಧುತ್ವವಾದಿ ಎನ್ನುವುದನ್ನು ಉಪ ಮುಖ್ಯಮಂತ್ರಿ ಯವರು ಸಾಬೀತು ಪಡಿಸಿದ್ದಾರೆ ಆಮೂಲಕ ತಮ್ಮ ಅಸಲೀ ಮನೋಭಾವನೆಯನ್ನು ಹೊರಗೆಡವಿದ್ದಾರೆ ಇದನ್ನು ನಾನು ಖಂಡಿಸುತ್ತೇನೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ಮೖಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.