ಚೆನ್ನೈ: ಬಿಜೆಪಿ ನಾಯಕ ಕೆ.ಅಣ್ಣಾಮಲೈ ಅವರಿಂದ ಪದಕವನ್ನು ಕುತ್ತಿಗೆಗೆ ಹಾಕಿಸಿಕೊಳ್ಳಲು ತಮಿಳುನಾಡು ಸಚಿವರೊಬ್ಬರ ಪುತ್ರನೊಬ್ಬ ನಿರಾಕರಿಸಿದ್ದಾನೆ. ತಮಿಳುನಾಡು ರಾಜ್ಯ ಶೂಟಿಂಗ್ ಕ್ರೀಡಾಕೂಟದ ವೇದಿಕೆ ಮೇಲೆ ಈ ಘಟನೆ ನಡೆದಿದ್ದು ಅಣ್ಣಾಮಲೈಗೆ ತೀವ್ರ ಮುಜುಗರವಾಗಿದೆ.
ಕೈಗಾರಿಕಾ ಸಚಿವ ಟಿ.ಆರ್.ಬಿ. ರಾಜಾ ಅವರ ಪುತ್ರ ಸೂರ್ಯ ರಾಜಾ ಬಾಲು, ಅಣ್ಣಾಮಲೈ ಅವರಿಂದ ಕುತ್ತಿಗೆಗೆ ಪದಕವನ್ನು ಹಾಕಿಸಿಕೊಳ್ಳದೇ, ಕೈಯಿಂದಲೇ ಪಡೆದಿದ್ದಾನೆ. ಘಟನೆಯ ವೀಡಿಯೋ ವೈರಲ್ ಆಗಿದೆ.
ಇದಕ್ಕೂ ಮುನ್ನ, ಡಿಎಂಕೆ ನಾಯಕರೊಬ್ಬರ ಪತ್ನಿಯೊಬ್ಬರು ರಾಜ್ಯಪಾಲ ಆರ್.ಎನ್.ರವಿ ಅವರಿಂದ ಪಿಎಚ್‌ಡಿ ಪದವಿ ಸ್ವೀಕರಿಸದಿದ್ದದ್ದು ಸುದ್ದಿಯಾಗಿತ್ತು. ಈ ಘಟನೆಯನ್ನು ಡಿಎಂಕೆ ನಾಯಕರ ಪ್ರಚಾರದ ಪ್ರಹಸನವೆಂದು ಅಂದು ಅಣ್ಣಾಮಲೈ ವ್ಯಂಗ್ಯವಾಡಿದ್ದರು.