ಲೈಂಗಿಕ ಕಿರುಕುಳದ ಆರೋಪಗಳಲ್ಲಿ ಉಡುಪಿ ಜಿಲ್ಲಾ ಸರ್ಜನ್ ಡಾ. ಎಚ್. ಅಶೋಕ್ ರವರನ್ನು ತಪ್ಪಿತಸ್ಥರಾಗಿ ಸರ್ಕಾರದ ಆದೇಶ ಸಂಖ್ಯೆ: ಆಕುಕ 117/MSA/2022 ದಿನಾಂಕ 03.02.2024ರಂದು ಐದು ಇನ್ ಕ್ರಿಮೆಂಟ್ ಕಡಿತಗೊಳಿಸುವ ಶಿಕ್ಷೆಗೆ ಒಳಪಡಿಸಿ, ಜಿಲ್ಲಾ ಶಸ್ತ್ರ ಚಿಕಿತ್ಸಕರ ಹುದ್ದೆಯಿಂದ ಹಿಂತೆಗೆದು ಬೆಂಗಳೂರಿನ ಕಮಿಷನರ್ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು.
ಸರ್ಜನ್‌ರವರ ವರ್ಗಾವಣೆಯನ್ನು ರದ್ದತಿಗಾಗಿ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ಪ್ರಶ್ನಿಸಿದರೂ ನ್ಯಾಯಮಂಡಳಿ ಪ್ರಕರಣ ಸಂಖ್ಯೆ: 619/2025ರಂತೆ ಇದೇ ತಿಂಗಳಲ್ಲಿ ಅವರ ಅರ್ಜಿಯನ್ನು ತಿರಸ್ಕರಿಸಿದೆ. ಯಾವುದೇ ಪದೋನ್ಮತ್ತಿಗೆ ಅರ್ಹರಲ್ಲದ ಇವರು ವರ್ಗಾವಣೆಗೊಂಡಿದ್ದರೂ, ಅದೇ ಹುದ್ದೆಯಲ್ಲಿ ಮುಂದುವರಿಯುತ್ತಿರುವುದನ್ನು ಕರ್ನಾಟಕ ದಲಿತ ಸಂಘಟನಾ ಸಮಿತಿ ಅಂಬೇಡ್ಕರ್ವಾದ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ್ ಮಾಸ್ತರ್ ತೀವ್ರವಾಗಿ ಖಂಡಿಸಿದ್ದಾರೆ.
ಸರ್ಜನ್ ಡಾ| ಅಶೋಕ್‌ರವರು ಉಡುಪಿಯ ಆಸ್ಪತ್ರೆಯಲ್ಲೂ ಈ ರೀತಿ ಮಹಿಳಾ ಪೀಡಿತರಾಗಿದ್ದು, ಈ ಬಗ್ಗೆ ಅವರ ಮೇಲೆ ಸಂಬಂಧಪಟ್ಟ ಇಲಾಖೆ, ಸಂಘಟನೆಗಳಿಗೂ ದೂರು ಬಂದಿರುತ್ತದೆ. ಕೆ.ಎ.ಟಿಯಲ್ಲಿ ಅವರ ಪ್ರಕರಣ ತಿರಸ್ಕೃತಗೊಂಡಿರುವುದರಿಂದ ಅವರನ್ನು ತಕ್ಷಣದಿಂದ ಜಿಲ್ಲಾ ಸರ್ಜನ್ ಹುದ್ದೆಯಿಂದ ತಕ್ಷಣ ವರ್ಗಾವಣೆಗೊಳಿಸಬೇಕು. ಈ ಬಗ್ಗೆ ಸರ್ಕಾರ ವಿಳಂಬ ತೋರಿದಲ್ಲಿ ಜಿಲ್ಲಾಸ್ಪತ್ರೆಯ ಎದುರು ಬೃಹತ್ ಪ್ರತಿಭಟನೆಯ ಮೂಲಕ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ್ ಮಾಸ್ತರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.